About Us

ಎಲ್ಲರಿಗೂ ನಮಸ್ಕಾರ ಅವಶ್ಯ ಸುದ್ದಿಗೆ ಸ್ವಾಗತ ಸುಮಾರು ಹತ್ತು ತಿಂಗಳು ಆಗಿದೆ ‘ಅವಶ್ಯ ಸುದ್ದಿ‘ ಪ್ರಾರಂಭ ಮಾಡಿ ಕೆಲವೊಂದು ಕಾರಣಾಂತರದಿಂದ ನ್ಯೂಸನ್ನೂ ಒದಗಿಸಲು ಸಾಧ್ಯವಾಗಿರಲಿಲ್ಲ, ತದನಂತರ ದೃಢ ನಿರ್ಧಾರಕ್ಕೆ ಬಂದು May 2021ರಂದು ಪುನರಾರಂಭ ಮಾಡಿದೆವು. ಅವಶ್ಯ ಸುದ್ದಿ team ನಲ್ಲಿ ಇಬ್ಬರು ಜನ ಇದ್ದಾರೆ. ನಾವು ಸಾಧ್ಯವಾದಷ್ಟು ಲೇಟೆಸ್ಟ್ ಇಂಫಾರ್ಮೇಷನ್ ಹಾಗೂ ಸರಿಯಾದ ಮಾಹಿತಿಯನ್ನು ಒದಗಿಸೋಕೆ ಪ್ರಯತ್ನಿಸುತ್ತೇವೆ. ನಿಮ್ಮ ಪ್ರೀತಿ ನಮ್ಮ ಮೇಲೆ ಸದಾ ಇರಲಿ.

ನಾವು ಈ ಹಿಂದೆ ಕೆಲ ನ್ಯೂಸ್ ಚಾನೆಲ್ ಗಳಲ್ಲಿ ಎಡಿಟರ್ ಆಗಿ ಕಾರ್ಯನಿರ್ವಹಿಸಿ ತದನಂತರವೇ ಅವಶ್ಯ ಸುದ್ದಿ ಮಾಡೋಕೆ ಮುಂದಾದೆವು. ಕಸ್ತುರಿ ನ್ಯೂಸ್ 24, ನ್ಯೂಸ್ ಫಸ್ಟ್ ಕನ್ನಡ, ನಿರೀಕ್ಷಿತ ಸುದ್ದಿ, ಶರವೇಗದ ಸುದ್ದಿ, ಇಂಗ್ಲಿಷ್ ಕಂಟೆಂಟ್ ರೈಟಿಂಗ್ ಫಾರ್ ಡಿಜಿಟಕ್ಲ್ ಮಾರ್ಕೆಟಿಂಗ್ ಏಜನ್ಸಿ, ಹೆಲ್ತ್ ಅಂಡ್ ಫಿಟ್ನೆಸ್ ರೈಟರ್ ಹಾಗೂ ಮುಂತಾದವು.

ಚಿಕ್ಕ ವಯಸಿನಿಂದಲು ಬರೆಯೋ ಹವ್ಯಾಸ ಇದೆ. ನನಗೆ 2014(ರಲ್ಲಿ) ಕಸ್ತುರಿ ನ್ಯೂಸ್ 24 ಚಾನೆಲ್ ನಲ್ಲಿ ಕೆಲಸ ಮಾಡೋ ಅವಕಾಶ ಸಿಕ್ಕಿತ್ತು ಅದು ನನಗೆ ಮುಂತಾಜ್ ಅಲೀಂ ಸರ್ ಕಡೆಯಿಂದ. ಅವರು ನನಗೆ ಶಶಿಧರ್ ಭಟ್ ಸರ್ ಅವರನ್ನ ಭೇಟಿ ಮಾಡಿಸಿದಾಗ ಅಲ್ಲಿ ಕೆಲಸ ಮಾಡೋ ಅವಕಾಶ ಸಿಕ್ಕಿತ್ತು. ಅವರಿಗೆ ನನ್ನ ಧನ್ಯವಾದಗಳು.