ಸರ್ಕಾರ ಮಾಡಬೇಕಾಗಿರೋ ಕೆಲಸ ಸೋನು ಸೂದ್ ಮಾಡುತ್ತಿದ್ದಾರಾಸರ್ಕಾರ ಮಾಡಬೇಕಾಗಿರೋ ಕೆಲಸ ಸೋನು ಸೂದ್ ಮಾಡುತ್ತಿದ್ದಾರಾ

ಕೆಲ ರಾಜಕಾರಣಿಗಳ ಹತ್ರ ಕೋಟಿ ಕೋಟಿ ಹಣ ಇದ್ರೂ ಸಹಾಯ ಮಾಡೋಕೆ ಕೈಗಳು ಮುಂದೆ ಬರೋದೇ ಇಲ್ಲ. ಪಾಪ, ವೋಟ್ ಹಾಕೋಕು ಮುಂಚೆ ಕೈಯತ್ತಿ ಸುಮ್ ಸುಮ್ನೆ ಓಲು ನಮಸ್ಕಾರ ಮಾಡ್ತಾರೆ, ನಾವೆಲ್ಲ ವೋಟ್ ಹಾಕಿ ಅವರು ಗೆದ್ಮೇಲೆ ನೀವು ನಿಮ್ಮನೆ ಕಡೆ ನಡಿಯರಿ ನಾವು ನಮ್ಮನೆಕಡೆ ನಡೀತೀವಿ ಅಂತ ತೀರ್ಥ ಪ್ರಸಾದ ಕೊಟ್ಟು ಟಾಟಾ ಬಾಯಿ ಬಾಯಿ ಎಂದು ಕೊನೆಗೆ ಗುಡ್ ಬಾಯಿ ಅಂತ ನಮಗೆ ನಮ್ಮನೆ ಕಡೆ ದಾರಿ ತೋರಿಸಿ ಕಣ್ಮರೆಯಾಗುತ್ತರೆ.

ಇನ್ನು ಕೆಲ ರಾಜಕಾರಣಿಗಳು ಸ್ವತಃ ತಾವೇ ಮುಂದೆ ನಿಂತು ಯಾರ ಹಂಗಿಲ್ಲದೆ ಕಷ್ಟಕ್ಕೆ ಸ್ಪಂದಿಸುತ್ತಾರೆ ಅದು ಅವರ ದೊಡ್ಡ ಗುಣ. ಅದೇ ಸೋನು ಸೂದ್ ರಾಜಕೀಯದ ವ್ಯಕ್ತಿನೇ ಅಲ್ಲ ಆದರೂ ರಾಜಕಾರಣಿಗಳಿಗಿಂತ ಹೆಚ್ಚು ಜನಸಾಮಾನ್ಯರಿಗೆ ಅತಿ ಹೆಚ್ಚು ಸಮಯ ತಗೆದುಕೊಳ್ಳದೆ ನೆರವಾಗುತ್ತಿದ್ದಾರೆ. ಸಹಾಯ ಕೇಳಿಕೊಂಡು ಬರೋ ಜನರಿಗೆ ಮನಸ್ಫೂರ್ತಿಯಿಂದ ಸಹಾಯ ಮಾಡುತ್ತಿದ್ದಾರೆ ಈ ನಟ.


ಸರ್ಕಾರ ಮಾಡಬೇಕಾಗಿರೋ ಕೆಲಸ ಸೋನು ಸೂದ್ ಮಾಡುತ್ತಿದ್ದಾರಾ?

ಸಿನಿಮಾಗಳಲ್ಲಿ ಖಳ ನಾಯಕ, ನಿಜ ಜೀವನದಲ್ಲಿ ಜನನಾಯಕ ಈ ಸೋನು ಸೂದ್. ಇಂತಹ ವ್ಯಕ್ತಿತ್ವ ಹೊಂದಿರೋ ರಾಜಕಾರಣಿಗಳು ಯಾರಾದರು ಇದ್ದಿದ್ರೆ ಕರ್ನಾಟಕದಲ್ಲೇ ಆಗಲಿ ಬೇರೆ ರಾಜ್ಯದಲ್ಲೇ ಆಗಲಿ ಇಂತಹ ಪರಿಸ್ಥಿತಿ ಉಂಟಾಗುತ್ತಿರಲಿಲ್ಲ, ಹಾಗಂತ ನಮ್ಮ ಕರ್ನಾಟಕದ ಹೆಸರಾಂತ ಕಲಾವಿದರು ಸುಮ್ನೆ ಕೂತಿಲ್ಲ ಅವರೂ ಕೂಡ ಶಕ್ತಿ ಮೀರಿ ಸಹಾಯ ಮಾಡುತ್ತಿದ್ದಾರೆ.

ಈ covid 19 ಅಲೆ ಯಾವಾಗ ಕಮ್ಮಿಯಾಗುತ್ತೋ ಗೊತ್ತಿಲ್ಲ ಮತ್ತೆ ಯಥಾ ಸ್ಥಿತಿಯಾಗೋಕೆ ಇನ್ನು ಅದೆಷ್ಟು ದಿನಗಳ ಕಾಲ ಬೇಕಾಗುತ್ತೊ ಏನೋ ಗೊತ್ತಿಲ್ಲ ಆದ್ರೆ ಸೋನು ಸೂಡ್ ಮಾತ್ರ ಸಹಾಯ ಮಾಡೋದನ್ನ ಮಾತ್ರ ನಿಲ್ಲಿಸಿಲ್ಲ. ನಮ್ಮ ಮಾಹಿತಿಗೆ ಫುಲ್ಸ್ಟಾಪ್ ಇರುತ್ತದೆ ಆದ್ರೆ ಇವರ ಸ್ಪಂದನೆಗಳಲ್ಲಿ ಫುಲ್ಸ್ಟಾಪ್ ಕಾಣಿಸುತ್ತಿಲ್ಲ.

ಅವರ ಈ ಇನ್ಸ್ಟಾಗ್ರಾಮ್ ಪೋಸ್ಟ್ ನೀವೇ ಒಂದು ಸಲ ನೋಡ್ಬಿಡಿ.


ಜನಗಳಿಗೆ ರಾಜಕಾರಣಿಗಳೇ ನೆರವಾಗಬೇಕಾರೋ ಸಮಯದಲ್ಲೂ ಸೋನು ಸೂದ್ ಮುಂದೆ ನಿಂತು ಕಷ್ಟ ಅಂತ ಬರೋ ಜನರಿಗೆ ನೆರವಾಗುತ್ತಿದ್ದಾರೆ. ಹಾಗಾದರೆ ಈ ಸರ್ಕಾರ ಏನ್ ಮಾಡ್ತಿದೆ? ಸರ್ಕಾರದ ಲೆಕ್ಕಾನೇ ತಿಳೀತಿಲ್ಲ? ಸರ್ಕಾರ ಮಾಡ್ತಿರೋ ಯಾವುದೇ ಕೆಲಸಕ್ಕೂ ಸುಳಿವೇ ಸಿಗುತ್ತಿಲ್ಲ ಯಾಕೆ? ಟ್ರಾನ್ಸ್ಫರೆಂಟ್ ಇಲ್ಲ ಅಂತ ಜನಗಳು ಎಲ್ಲ ಸಾಮಾಜಿಕ ಜಾಲತಾಣದಲ್ಲಿ ಕೇಳುತ್ತಿದ್ದಾರೆ. ಇವರು ಹೇಳೋದೊಂದು ಮಾಡ್ತಿರೋದಿನ್ನೊಂದು.

ಸೋನು ಸೂದ್ | ಜನನಾಯಕ

ಇಲ್ಲಿವರೆಗೂ 20000 ಜನಗಳಿಗೆ ಅವರವರ ಊರು ಸೇರಿಕೊಳ್ಳೋಕೆ ಬಸ್, ಟ್ರೈನ್ ವ್ಯವಸ್ಥೆ ಮಾಡಿಕೊಟ್ಟಿದ್ದಾರೆ ಅದರಲ್ಲಿ ಕೆಲವರು ಬಡ ಕಾರ್ಮಿಕರಾದರೆ ಇನ್ನ ಕೆಲವರು ಸಣ್ಣ ಪುಟ್ಟ ವ್ಯಾಪಾರಸ್ಥರು. ಅದಲ್ಲದೆ ಏರ್ ಟಿಕೆಟ್ ಕೂಡ ಬುಕ್ ಮಾಡಿಸಿಕೊಟ್ಟಿದ್ದಾರೆ ಹಾಗಾದರೆ ನಿಮಗೆಲ್ಲ ಅನ್ನಿಸಬಹುದು ಬಾಲಿವುಡ್ ನಲ್ಲಿ ಇವರೊಬ್ಬರೇನಾ ಸಹಾಯ ಮಾಡ್ತಿರೋದು ಅಂತ? ಶಹರುಖ್ ಖಾನ್ ಸಲ್ಮಾನ್ ಖಾನ್ ಆಮೀರ್ ಖಾನ್ ಅಜಯ್ ದೇವ್ಗನ್ ರಿತೇಶ್ ದೇಶಣ್ಮುಖ್ ಇವರೆಲ್ಲ ಎಲ್ಲಿ ಹೋದರು? ಹೆಸರಿಗೆ ಮಾತ್ರ ಹೀರೋಗಳಾ ಅಥವಾ ನಿಜ ಜೇವನದಲ್ಲಿಯೂ ಹೀರೋಗಳೇನಾ ಅಂತ. ನಿಜ ಜೀವನದಲ್ಲಿಯೂ ಹೀರೋಗಲಾಗಿದ್ದರೆ ಎಲ್ಲಿ ಏನ್ ಮಾಡುತ್ತಿದ್ದಾರೆ? ಬರಿ ಸಿನಿಮಾ ಪ್ರಮೋಷನ್ಸ್ ಗಳಿಗೆ ಮಾತ್ರ ಸೋಶಿಯಲ್ ಮೀಡಿಯಾ ದಲ್ಲಿ ಆಕ್ಟಿವ್ ಆಗಿರ್ತಾರಾ ಅಥವಾ ಸಾಮಾಜಿಕ ಜಾಲತಾಣದಲ್ಲಿ ಆಕ್ಟಿವಾಗಿದ್ರೆ ಫ್ಯಾನ್ಸ್ ಗಳು ಕೇಳೋ ಪ್ರಾಶ್ನೆಗಳಿಗೆ ಉತ್ತರಕೋಡಬೇಕಾಗುತ್ತಲ್ಲ ಅಂತ ಸೈಲೆಂಟಾಗಿದ್ದಾರಾ ಅಂತ ನಿಮಗೆ ಅನ್ನಿಸಬಹುದು ಆದರೆ ಅವರು ಕೂಡ ಬಡ ಜನಗಳಿಗೆ ದಿನಸಿ ಕಿಟ್ ಹಾಗೂ ಮುಂತಾoದನ್ನ ತಾಲಪಿಸೋ ಪ್ರಯತ್ನಿಸುತ್ತಿದ್ದಾರೆ ಆದರೆ ಸೋನು ಸೂಡ್ ರವರಷ್ಟಲ್ಲಾ ಅನ್ನೋದೇ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ದೊಡ್ಡ ಪ್ರಶ್ನೆ.

ಸಿನಿಮಾಗಳಲ್ಲಿ ಒಬ್ಬ ವಿಲನ್ ನೂರಾರು ಜನಗಳನ್ನ ಸಾಯಿಸಿದರೆ, ನಿಜಜೀವನದಲ್ಲಿ ಇದೇ ಸಿನಿಮಾ ವಿಲನ್ ಸಾವಿರಾರುಜನಗಳಿಗೆ ಕಷ್ಟದ ಪರಿಸ್ಥಿತಿಯಲ್ಲಿ ನೆರವಾಗಿದ್ದಾರೆ ಅಂದರೆ ಮೆಚ್ಚುಗೆ ಪಡಲೇ ಬೇಕು. ಸಿನಿಮಾದ ದೊಡ್ಡ ಹೀರೋ ದೊಡ್ಡದಾಗಿ ಸಹಾಯ ಮಾಡಿದರೆ ದೊಡ್ಡ ವ್ಯಕ್ತಿ ಅನ್ನಿಸಿಕೊಳ್ಳುತ್ತಾರೆ ಆದರೆ ದೊಡ್ದ ವಿಲನ್ ದೊಡ್ಡದಾಗಿ ಸಹಾಯಮಾಡಿದರೆ ಆವರನ್ನ ಕಲಿಯುಗದ ದೇವಪುರುಷ ಅಂದು ಕರೆಯಲಾಗುತ್ತಿದೆ ಅಂತ ಸಾಮಾಜಿಕ ಜಾಲತಾಣದಲ್ಲಿ ಈ ವಿಚಾರ ಎಲ್ಲಿರಿಗೂ ಗುಲ್ ಎಬ್ಬಿಸಿದೆ.

ಬಹುಶಃ ಕೆಲವರಿಗೆ ಪ್ರಚಾರ ಇಷ್ಟವಾಗುವುದಿಲ್ಲ ಅದಕ್ಕಾಗಿಯೇ ಅವರು ಯಾರಿಗೂ ಗೊತ್ತಾಗದಂತೆ ರೇಷನ್ ಕಿಟ್ ಅಥವಾ ಫುಡ್ ಪ್ಯಾಕೆಟ್ಗಳ್ಳನ್ನು ಸೈಲೆಂಟ್ ಆಗಿ ಬಡ ಜನಗಳಿಗೆ ತಲಪಿಸುತ್ತಿದ್ದಾರೆ. ಅದರಲ್ಲಿ ಕೆಲ ಗಣ್ಯ ವ್ಯಕ್ತಿಯರು ಹಾಗೂ ದೊಡ್ಡ ಹೆಸರಾಂತ ಮನೆತನದವರು ಪಬ್ಲಿಸಿಟಿ ಇಲ್ಲದೆ ಜನಕ್ಕೆ ಕೈಲಾದ ಸಹಾಯವನ್ನು ಮಾಡುತ್ತಿದ್ದಾರೆ.

ಕಾರೋನಾಗೆ ನಾವೇಷ್ಟೇ ಶಾಪ ಹಾಕಿದರೂ ಪ್ರಯೋಜನವಿಲ್ಲ

ಕಾರೋನಾಗೆ ನಾವೇಷ್ಟೇ ಶಾಪ ಹಾಕಿದರೂ ಪ್ರಯೋಜನವಿಲ್ಲ ಏಕೆಂದರೆ ಕಾರೋನ ವೈರಸ್ ಚೀನಾದಿಂದ ಹರಡಿ ಇಡಿ ಪ್ರಪಂಚಕ್ಕೆ ಸಾವು ನೋವು ತಂದಿದೆ. ಈಗಾಗಲೇ ಚೀನಾ ದಲ್ಲಿ ಕಾರೋನ ಅಂದರೆ ಭಯನೇ ಇಲ್ಲ. ಅಲ್ಲಿ ದಿನಕ್ಕೆ ತುಂಬಾ ಅಂದ್ರೆ ತುಂಬಾನೇ ಕಮ್ಮಿ ಕೇಸ್ಸೆಸ್ ರಿಜಿಸ್ಟರ್ ಆಗ್ತಿದೆ ಮುಂದಿನದಿನಗಳಲ್ಲಿ ಚೀನಾದಲ್ಲಿ ಕರೋನ ಕೇಸ್ ಕ್ಲೋಸ್ ಆಗಿಬಿಡುತ್ತೆ ಆದರೆ ಭಾರತ ದೇಶದಲ್ಲಿ ನಾವೆಲ್ಲ ಇನ್ನು ಒಗ್ಗಟ್ಟಾಗಿ ಈ ಹೆಮ್ಮಾರಿ ಕರೋನಾವನ್ನ ಹೊಡೆದು ಓಡಿಸಬೇಕು. ತದನಂತರ ಯಾವ ವಿಚಾರಕ್ಕೆ ಬೇಕಾದರೂ ಆಮೇಲೆ ಹೋರಾಡಬಹುದು. ಸಧ್ಯಕ್ಕೆ ಜೀವ ಉಳಿಸಿಕೊಳ್ಳೋದೊಂದೇ ಮಾರ್ಗ.

ಈ pandemic ಸಮಯದಲ್ಲಿ ದ್ವೇಷ, ಮೋಸ, ಅನ್ಯಾಯ, ಅಕ್ರಮ, ಮತಾಂತರ ಮಾಡೋದನ್ನ ಬಿಟ್ಟು ಕಣ್ಣಿಗೆ ಕಾಣೋ ಜನರಿಗೆ ಸ್ವಲ್ಪನಾದ್ರೂ ಸಹಾಯ ಮಾಡಿದರೆ ತುಂಬಾ ಒಳ್ಳೆಯದು. ಎಷ್ಟು ದಿನ ಅಂತ ಸೋನು ಸೂಡ್, ಉಪೇಂದ್ರ ಹಾಗೆ ಇವರಂತಹ ವ್ಯಕ್ತಿತ್ವ ಉಳ್ಳ ಜನ ಸಹಾಯ ಮಾಡೋಕೆ ಸಾಧ್ಯ ನೀವೇ ಹೇಳಿ?

ಈ ರಾಜಕಾರಣಿಗಳಿಗೆ ರಾಜಕೀಯವನ್ನು ಮಾಡೋದನ್ನ ಬಿಟ್ಟು ಸರಿಯಾದ ನಿರ್ಧಾರವನ್ನು ತೆಗೆದುಕೊಂಡರೆ ಬುದ್ಧಿವಂತರ ಲಕ್ಷಣ ಇಲ್ಲದಿದ್ದರೆ ಜನಗಳ ಅಂತ್ಯಕ್ಕೆ ನೀವೇ ಕಾರಣವಗುತ್ತೀರಿ. ಮತ್ತೆನಾದರೂ ಸರ್ಕಾರ ಈ ಹೆಮ್ಮಾರಿಯನ್ನ ನಿರ್ಲಕ್ಷಿಸಿದರೆ ಭಾರತ ದೇಶ ಸoಪೂರ್ಣವಾಗಿ ನೆಲಸಮವಾಗುತ್ತದೆ ಇದು ಕಟ್ಟಿಟ್ಟಬುತ್ತಿ.

Featured Image credits – Sonu Sood

Leave a Reply