ಉಪ್ಪಿರವರ ಈ ಕೆಲಸಕ್ಕೆ ನೀವೇಷ್ಟುಜನ ಕೈ ಜೋಡಿಸುತ್ತೀರಾಉಪ್ಪಿರವರ ಈ ಕೆಲಸಕ್ಕೆ ನೀವೇಷ್ಟುಜನ ಕೈ ಜೋಡಿಸುತ್ತೀರಾ

ನಾವು ಇನ್ನೊಬ್ಬರಿಗೆ ಒಂದು ವಸ್ತುವನ್ನು ತಗೋ ಅನ್ನೋದರಬದಲಾಗಿ ಬೇರೆ ರೀತಿ ಪ್ರಭಾವ ಬೀರಿದರೆ (influence) ಬೇಗೆನೆ ಜನ ಸ್ವೀಕರಿಸುತ್ತಾರೆ, ಆದೇ ರೀತಿ ಉಪ್ಪಿ ಸರ್ ಮಾಡುತ್ತಿರುವುದು ಇದೆ. ಹ್ಯಾಗಪ್ಪ ಇದು ಅಂತ ವಿವರಣೆ ಕೊಡೋದಾದರೆ, ಜನಕ್ಕೆ ಒಂದು ಪ್ರಾಡಕ್ಟ್ ಬಗ್ಗೇನೆ ಆಗಲಿ ಅಥವಾ ಸೋಶಿಯಲ್ sevice ಬಗ್ಗೇನೆ ಆಗಲಿ ನಾವು ನಮ್ಮ ಸ್ನೇಹಿತರಿಗೆ ಆಗಲಿ ಅಥವಾ ಬೇರೆಯವರಿಗೆ ಆಗಲಿ ನೇರವಾಗಿ ಹೇಳಿದರೆ ತಿರಸ್ಕರಿಸುತ್ತಾರೆ. ಅದೇ ನಾವು ನಮ್ಮ ಕೆಲಸ ನಮ್ಮ ಪಾಡಿಗೆ ಮಾಡುತ್ತಾ ಇದ್ದರೆ ಜನ ನಮ್ಮ ಕೆಲಸ ನೋಡಿ ನಮ್ಮ ಜೊತೆ ಸೇರೋಕೆ ಮುಂದೆ ಬರುತ್ತಾರೆ ಇದಕ್ಕೆ ಹೇಳೋದು ಇನ್ಫ್ಲುಯೆನ್ಸ್ ಅಂತ. ನೀವು ಕೂಡ ಇದನ್ನು ಮಾಡಿದರೆ ಆ ಖುಷಿಯನ್ನು ನಮ್ಮ ಜೊತೆ ಕಾಮೆಂಟ್ ಮುಖಾಂತರ ಹಂಚಿಕೊಳ್ಳಿ.

ಬಹುಶಃ ಉಪ್ಪಿರವರ ಇಂತಹ ಕೆಲಸಗಳನ್ನ ನೋಡುತ್ತಾ ಬಂದಿರೋರೆ ಉಪ್ಪಿರವರೆ ನಮಗೆ ಮುಂದೆ ಈ ರಾಜ್ಯಕ್ಕೆ ಮುಖ್ಯಮಂತ್ರಿ ಆಗಲಿ ಎಂದು ಆಶಯಿಸುತ್ತಿದ್ದಾರೆ. ಏಕೆಂದರೆ ಅವರು ಮಾಡುತ್ತಿರುವ ಎಲ್ಲ ಕೆಲಸಗಳು ತುಂಬಾನೇ ಟ್ರಾನ್ಸ್ಪರೆಂಟ್ ಆಗಿರುತ್ತೆ ಯಾವುದೇ ರೀತಿಯಿಂದ ಮುಚ್ಚು ಮರೆ ಇರೋದಿಲ್ಲ ಅಂತ ನಂಬಿಕೆ ಜನರಲ್ಲಿದೆ.


ಒಂದು ಕಾಲದಲ್ಲಿ ಉಪ್ಪಿ ರವರ ‘ಎ‘ ಮತ್ತು ‘ಉಪೇಂದ್ರ‘ ಸಿನಿಮಾಗಳನ್ನು ನೋಡಿದಾಗ ಎಷ್ಟೋ ಜನ ಹಿಡಿ ಶಾಪ ಹಾಕಿದ್ರು ಆದ್ರೆ ಕಾಲ ಬದಲಾದಾಗ ಉಪ್ಪಿ ಯವರು ನಿರ್ದೇಶನ ಮಾಡಿರೋ ಈ ಸಿನಿಮಾಗಳು ತುಂಬಾನೇ ಪ್ರಾಕ್ಟಿಕಲ್ ಆಗಿದೆ ಅಂತ ಅದೇ ಜನರು ಹೇಳುತ್ತಿದ್ದಾರೆ, ಏಕೆಂದರೆ ‘ಪ್ರಜಾಕೀಯ’ ಪ್ರಾರಂಭಿಸಿದಾಗ ಜನರು ತುಂಬಾನೇ ಆಡಿಕೋಂಡರು ಆದ್ರೆ ಈಗ ಕರ್ನಾಟಕದ ಜನರು ಉಪ್ಪಿಯವರನ್ನು ಆಯ್ಕೆಮಾಡಿಕೊಳ್ಳುತಿದ್ದಾರೆ. ಇವರೇ ನಮ್ಮ ಮುಂದಿನ ಸಿ ಎಮ್ ಕಾಮನ್ ಮ್ಯಾನ್.

ಉಪ್ಪಿರವರ ಒಂದು ಟ್ವೀಟ್ ಗೆ ಬೆಲೆ ಕೂಟ್ಟು ಹಲವಾರು ಜನ ನಾ ಮುಂದು ತಾ ಮುಂದು ಅಂತ ಉಪ್ಪಿರವರ ಈ ಒಂದು ಯೋಜನೆಗೆ ಕೈ ಮಿಲಾಯ್ಸೋಕೆ ಸಿನಿಮಾದವರಲ್ಲದೆ ಬೇರೆ ಬೇರೆ ಉದ್ಯಮಿಗಳು, ಕೆಲವು ಬ್ಯುಸಿನೆಸ್ಗೆಮೆನ್ಗಳು ಹಾಗು ನಮ್ಮoತಹ ಜನರು ಕೂಡ ಅಳಿಲು ಸೇವೆ ಮಾಡೋಕೆ ಮುಂದೆ ಬರುತ್ತಿದ್ದಾರೆ.


ಉಪ್ಪಿರವರ ಈ ಕೆಲಸಕ್ಕೆ ನೀವೇಷ್ಟು ಜನ ಕೈ ಜೋಡಿಸುತ್ತೀರಾ?

ಉಪ್ಪಿ CM ಆದ್ರೆ ಏನೆಲ್ಲ ಮಾಡಬಹುದು ಅಂತ ಆಗಾಗ ಯೋಚನೆ ಮಾಡ್ತನೇಯಿರ್ತೀವಿ ಆದ್ರೆ ನಮ್ಮ ಯೋಚನೆಗಳ ಪ್ರಕಾರ ಉಪ್ಪಿರವರ ಯೋಜನೆಗಳೇ ಬೇರೆ ಏಕೆಂದರೆ ಉಪ್ಪಿ ಸರ್ ಯಾವಾಗಲು ವಿಭಿನ್ನ. ಸಿನಿಮಾ ಮಾಡೋದ್ರಲ್ಲೇ ಆಗಲಿ ಸಹಾಯ ಮಾಡೋದ್ರಲ್ಲೇ ಆಗಲಿ ಅಥವಾ ಪ್ರಜಾಕೀಯದ ವಿಷಯದ ಬಗ್ಗೆ ಆಗಲಿ. ಸೂಪರ್ ಸಿನಿಮಾದಲ್ಲಿ ತೋರಿಸಿದ ಹಾಗೆ ನಿಜವಾಗಿಲು ಕರ್ನಾಟಕದ CM ಆಗಿಬಿಟ್ಟರೆ ಏನೆಲ್ಲಾ ಬದಲಾವಣೆಗಳು ಕಾಣಬಹುದು ಅಂತ ಕಾದು ನೋಡಬೇಕು.

ಈ ಒಂದು ಸಂದರ್ಭದಲ್ಲಿ (COVID19) ಯಾವುದೇ ರಾಜಕೀಯದ ಯೋಜನೆಯಿಲ್ಲದೆ ಹಲವಾರು ಸಿನಿಮಾ ಕಾರ್ಮಿಕರಿಗೆ ಉಪ್ಪಿರವರು ಸಹಾಯ ಮಾಡಲು ಮುಂದೆಬಂದಿದ್ದು ಅವರಿಗೆ ದಿನಸಿ ಕಿಟ್ ಕೊಡುವ ವಿಷಯ, ಮೊನ್ನೆ ತಾನೇ ಟ್ವೀಟ್ ಮಾಡಿದ್ದರು. ಈ ಒಂದು ಟ್ವೀಟ್ ನೋಡುತ್ತಿದ್ದಂತೆ ಹಲವಾರು ಕಲಾವಿದರು ನಿರ್ಮಾಪಕರು, ನಿರ್ದೇಶಕರು ಉಪ್ಪಿರವರಿಗೆ ಸಾಥ್ ಕೊಟ್ಟಿದಾರೆ. ಹಾಗಾದರೆ ಅವರೆಲ್ಲ ಯಾರು, ಇಲ್ಲಿದೆ ಫುಲ್ ಡೀಟೇಲ್ಸ್.

 1. ದಾವಣಗೆರೆಯ ಮಾಜಿ ಶಾಸಕರಾದ ಯಜಮಾನ್ ಮೋತಿ ವೀರಣ್ಣ ರವರ ಪುತ್ರ ಯಜಮಾನ್ ಮೋತಿ ರಾಜೇಂದ್ರ ರವರು ಒಂದು ಲಕ್ಷ ರೂಪಾಯಿ ಕೊಡಲು ಮುಂದೆ ಬಂದಿದ್ದಾರೆ.
 2. Dr ಗಿರೀಶ್ ಮೂಡ್ ರವರು ಇಪ್ಪತೈದು ಸಾವಿರ ದೇಣಿಗೆ ನೀಡಿದ್ದಾರೆ.
 3. ಖ್ಯಾತ ಕನ್ನಡ ಚಿತ್ರ ನಟ ಶೋಭ್ ರಾಜ್ ರವರು ಹತ್ತು ಸಾವಿರರೊಪಾಯಿಗಲ್ಲನ್ನು ಉಪ್ಪಿರವರಿಗೆ ನೀಡಿದ್ದಾರೆ.
 4. ಭಾರತದ ವ್ಯಕ್ತಿ ಅಮೇರಿಕಾದ ನಿವಾಸಿ ಅನಿಲ್ ರವರು ಇಪ್ಪತೈದು ಸಾವಿರ ನೀಡಿದ್ದಾರಂತೆ.
 5. ಉಪ್ಪಿಯ ನಿಸ್ವಾರ್ಥ ಸೇವಕರ ಸಂಘದ ವ್ಯಕ್ತಿ ಸಂತೋಷ್ ರವರು ಇಪ್ಪತ್ತು ಸಾವಿರರೂಪಾಯಿಗಲ್ಲನ್ನು ನೀಡಿದ್ದಾರೆ
 6. ಕನ್ನಡ ಚಿತ್ರದ ಖ್ಯಾತ ನಿರ್ದೇಶಕ ಪವನ್ ಒಡೆಯರ್ ರವರು ಇಪ್ಪತ್ತು ಸಾವಿರರೂಪಾಯಿಗಲ್ಲನ್ನು ಕೊಟ್ಟಿದ್ದಾರೆ.
 7. ಬಿ ಸರೋಜ ದೇವಿಯವರು ನಾಲ್ಕು ಲಕ್ಷರೂಪಾಯಿಗಲ್ಲನ್ನು ನೀಡಿದ್ದಾರಂತೆ.
 8. ಹಾಸ್ಯ ನಟ, ನಿರ್ದೇಶಕ, ನಿರ್ಮಾಪಕ ಹಾಗು ಸಂಗೀತ ನಿರ್ದೇಶಕರಾದ ಸಾಧು ಕೋಕಿಲ ರವರು ಎರಡುವರೆ ಲಕ್ಷರೂಪಾಯಿಯಷ್ಟು ದಿನಸಿ ಕಿಟ್ಗಲ್ಲನ್ನ ಆರ್ಕೆಷ್ಟ್ರಾ ಕಲಾವಿದರಿಗೆ ಹಂಚಲು ಮುಂದಾಗಿದ್ದಾರೆ.
 9. ಮಾನ್ಯ ನಾಯ್ಡು ಇವರು ‘ಶಾಸ್ತ್ರಿ’ ಚಿತ್ರ ದಲ್ಲಿ ನಟಿಸಿದ್ರು, ಇವರೂ ಕೂಡ ಸಹಾಯ ಮಾಡಲು ಮುಂದೆಬಂದಿದ್ದಾರೆ ಅದು ಒಂದು ಲಕ್ಷ ರೂಪಾಯಿಗಲ್ಲನ್ನು ಕೊಟ್ಟಿದ್ದಾರೆ, ಸಧ್ಯಕ್ಕೆ ಇವರು ಅಮೇರಿಕಾದಲ್ಲಿ ವಾಸಿಸುತ್ತಿದ್ದಾರೆ.
 10. ಕೆ ಮ್ ಫ್ ಮಾಜಿ ಮ್ ಡಿ ಪ್ರೇಮ್ ನಾಥ್ ರವರು 20000 ರೂಪಾಯಿಗಲ್ಲನು ಅರೇಹಳ್ಳಿ ಗ್ರಾಮ ಪಂಚಾಯತ್ ಸದಸ್ಯರಾದ ಚೇತನ್ ಕುಮಾರ್ ರವರಿಗೆ ಕೊಟ್ಟಿದ್ದಾರೆ, ಈ ಹಣವನ್ನು ಅಲ್ಲಿರೋ ಜನಗಳಿಗೆ ಸರಿಯಾದ ರೀತಿಯಲ್ಲಿ ಉಪೋಯೋಗವಾಗಲಿ ಎಂದು ಕೊಟ್ಟಿದ್ದಾರೆ.
 11. ಬಾಲನಟ ‘ಅನಿಶ್ ಸಾಗರ್ ನಾಯ್ಡು’ ತನ್ನ ಶಾರ್ಟ್ ಮೂವೀ ಇಂದ ಸಂಭಾವನೆ ಹತ್ತು ಸಾವಿರ ಪಡೆದಿದ್ದನ್ನ ಉಪ್ಪಿ ರವರಿಗೆ ನೀಡಿದ್ದಾರೆ.
 12. ಸಂಗೀತ ಮೊಬೈಲ್ಸ್ ರವರು ಒಂದು ಲಕ್ಷ ರೂಪಾಯಿ ಕೊಟ್ಟಿದ್ದಾರೆ.


ಕೆಲವು ಉಪ್ಪಿ ಅಭಿಮಾನಿಗಳು ಹೀಗೆ ಹೇಳಿದರು

ಇದು ಪ್ರಜಾಕೀಯದ ಪ್ರಮೋಷನಲ್ ಟಾಕ್ಟಿಕ್ ಅಲ್ಲ. ಉಪ್ಪಿರವರ ಸ್ವಂತ ಇಚ್ಛೆ ಮತ್ತೆ ರಾಜಕೀಯದ ವ್ಯಕ್ತಿಗಳು ಚೀಪ್ ಗಿಮಿಕ್ಸ್ ಮಾಡ್ತಾರೆ ಆದ್ರೆ ಪ್ರಜಾಕೀಯದವರಲ್ಲ. ನಾವು ಸಿಂಪ್ಲಿಸಿಟಿ ಕ್ರಿಯೇಟ್ ಮಾಡಿ ಯಾರಿಗೂ ಮನವರಿಕೆ ಮಾಡುತ್ತಿಲ್ಲ, ಉತ್ತಮ ಪ್ರಜಾಕೀಯದ ಬಗ್ಗೆ ನಂಬಿಕೆ ಇದೆ, ದೇಶ ವಿದೇಶಗಳಿಂದ ನಮಗೆ ಪ್ರೋತ್ಸಾಹ ಮಾಡುತ್ತಿದ್ದಾರೆ.

ಹಾಗೆಯೇ ಇನ್ನು ಹಲವಾರು ಜನರು ಕಷ್ಟದಲ್ಲಿರುವ ಜನರಿಗೆ ಸಹಾಯಮಾಡಲು ಮುಂದೆ ಬರುತ್ತಿದ್ದಾರೆ. ಉಪ್ಪಿಯವರ ಈ ಕಾರ್ಯಕ್ಕೆ ಮತ್ತಷ್ಟು ಬಲ ಸಿಗಲಿ ಅನ್ನೋದೇ ನಮ್ಮೆಲ್ಲರ ಆಶಯ.

ಧನ್ಯವಾದಗಳು

Featured image credits – upendra

Leave a Reply